Bhakta Prahlada | Naanaru kshyapa bramhana maga | Dr.Rajkumar super Dialogue


Dr.Rajkumar
ಮ್.. ನಾನಾರು ಕಶ್ಯಪ ಬ್ರಹ್ಮನ ಮಗ
ದಿತಿ ಗರ್ಭ ಸಂಜಾತ
ಚತುರ್ಮುಖ ಬ್ರಹ್ಮನ ಮೊಮ್ಮಗ

ವಿಧಾತನಿಂದ ವಿಧಿ ಬರಹವನ್ನೆ ಬದಲಾಯಿಸಿ
ಮರಣವನ್ನೆ ಮೆಟ್ಟಿನಿಂತ ಮಹಾವೀರ
ಅದಿತಿಯ ಮಕ್ಕಳ ಅಟ್ಟಹಾಸವನ್ನ ಸುಟ್ಟು
ಆದಿತ್ಯನ ಅಟ್ಟಹಾಸವನ್ನ ಮಟ್ಟ ಹಾಕಿದ ಸಾಹಸಿ

ಅತಳ ವಿತಲ ಸುತಳ ರಸಾತಳ ತಳಾತಳ ಮಹಾತಳ ಪಾತಾಳಗಳನ್ನು
ಪಾದದಡಿಯಲ್ಲಿ ತುಳಿದಿಟ್ಟ ಪರಾಕ್ರಮಶಾಲಿ

ಅಡಿಯಿಟ್ಟರೆ ಬಿರಿಯುವುದು ಭೂಮಿ
ತಲೆಯೋತ್ತಲೆ ಬೆಚ್ಚುವುದು ಬಾನು
ಕೈ ಎತ್ತಲು ನಡುಗುವುದು ಸೃಷ್ಟಿ
ಚತುರ್ಮುಖನ ಸೃಷ್ಟಿಯೇ ನನ್ನ ಆಜ್ಞೆಯನ್ನು ಪಾಲಿಸುತ್ತಿರುವಾಗ
ಎಕ್ಕಜತ್ನನ ಮಗ, ನಾ ಜನ್ಮ ಕೊಟ್ಟ ಮಗ
ನನ್ನ ವಂಶವನ್ನೆ ಬೆಳಗಬೇಕಾದ ನನ್ನ ಕುಮಾರ
ನನ್ನ ಆಶಾಜ್ಯೋತಿಯಿಂದ
ಇಂದು ನನ್ನ ಮನಸ್ಸಿಗೆ ನೆಮ್ಮದಿ ಇಲ್ಲವೆಂದರೆ...
ಛೀ... ಇದೊಂದು ಬದುಕೆ, ಇದೊಂದು ಜನ್ಮವೆ
ಎಂತಹ ದುರ್ವಿಧಿ ಇದೆಂತಹ ದುರ್ವಿಧಿ

ನಾನೇ ಸರ್ವಶಕ್ತನೆoದುಕೊಂಡರೆ
ಅದಾವ ಶಕ್ತಿ ನನಗೆ ಎದುರಾಗಿ ನಿಂತು ಕಾಡುತ್ತಿದೆ
ಅದಾವ ಶಕ್ತಿ ಪುತ್ರನನ್ನೆ ಶತ್ರುವನ್ನಾಗಿ ಮಾಡಿದೆ
ಅದಾವ ಶಕ್ತಿ ಅವನಿಗೆ ನನ್ನ ಎದುರಿಸುವ ಧೈರ್ಯ ತುಂಬಿದೆ
ಅದಾವ ಶಕ್ತಿ ಅವನಿಗೆ ಸಾವು ಬರದಂತೆ ತಡೆದಿದೆ
ಅದಾವ ಶಕ್ತಿಯೆನ್ನ ಮುಖಭಂಗ ಮಾಡಿ ತಲೆತಗ್ಗಿಸುವಂತೆ ಮಾಡಿದೆ
ಆ...ಹಾ...ಹಾ.... ಅವನೆ... ಆ ದುಷ್ಟನೆ...
ಆ ನನ್ನ ಕುಲವೈರಿಯಾದ ಹರಿಯೆ ಇದಕ್ಕೆಲ್ಲ ಕಾರಣ
ಎಲವೆಲವೊ ಹರಿ ಕಪಟಿ ವಂಚಕಿ
ನನ್ನ ಮಗನ ಹೃದಯಾಂತರಲಾವನ್ನು ಹೊಕ್ಕು
ಅವನ ತಲೆಯನ್ನು ಕೇಡಿಸಿ ಮನಬಂದತೆ ಅಡಿಸುತ್ತಿರುವೆಯ
ನಿನಗೆ ಪೌರುಷವಿದ್ದರೆ ಪರಮ ಪುರುಷೋತ್ತಮನೆ ನೀನಾಗಿದ್ದರೆ
ನನ್ನಂತೆ ನಿಜವಾದ ಗಂಡು ನೀನಾಗಿದ್ದರೆ ಬಾ....
ಬಂದು ನನ್ನ ಎದುರುಗೆ ನಿಲ್ಲು
ನಿನ್ನ ಉದರವನ್ನು ಬಗೆದು
ನಿನ್ನ ಕರಳುಗಳನ್ನು ಮಾಲೆ ಹಾಕಿಕೊಳ್ಳದಿದ್ದರೆ
ಆ..ಆ... ನಾನು ಹಿರಣ್ಯ ಕಶಿಪುವೆ ಅಲ್ಲ
ನಾನು ಹಿರಣ್ಯ ಕಶಿಪುವೆ ಅಲ್ಲ
ನಾನು ಹಿರಣ್ಯ ಕಶಿಪುವೆ ಅಲ್ಲ.













Posted By,
RajeshKRPet

Comments

  1. Thanks a lot....
    Please upload other legendary dialogues from ಮಯೂರ, ಬಬ್ರುವಾಹನ, ಕವಿರತ್ನ ಕಾಳಿದಾಸ, etc....
    Please...🙏🙏🙏🔥🔥🔥👌👌👌👌💯

    ReplyDelete
  2. Nicely re written.... But it is ಯಕಶ್ಚಿತ್ ನನ್ನ ಮಗ..... Not ಎಕ್ಕ ಜತ್ನ ನ ಮಗ.... Thanks for your efforts and share.... 🙏

    ReplyDelete

Post a Comment

Popular posts from this blog

Dr.Rajkumar Kannada Movies List | All Movies List